ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಶ್ರೀ ಗುರು ಸಾನಿಧ್ಯ ವಾಣಿಜ್ಯ ಸಂಕೀರ್ಣ, ಆಡಳಿತ ಕಚೇರಿ ಉದ್ಘಾಟನೆ
ಬೆಳ್ತಂಗಡಿ. ಜೂನ್ 13: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘವು ನಿರ್ಮಿಸಿದ ಶ್ರೀ ಗುರು ಸಾನಿಧ್ಯ ವಾಣಿಜ್ಯ ಸಂಕೀರ್ಣ, ನೂತನ ಅಡಳಿತ ಕಚೇರಿಯನ್ನು ಲೋಕಾರ್ಪಣೆಗೊಳಿಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಸಾಧನೆಯ ಮೈಲಿಗಲ್ಲನ್ನು ಮೆಟ್ಟಿದೆ.
ಉಪಾಧ್ಯಕ್ಷ ಭಗೀರಥ. ಜಿ ಅಧ್ಯಕ್ಷತೆಯಲ್ಲಿ ಬೆಂಗಳೂರು ಆರ್ಯ ಈಡಿಗ ಸಂಸ್ಥಾನ ಸೋಲೂರು ಮಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ
ಸ್ವಾಮೀಜಿ ಸಾನಿಧ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್ ಅವರು ಲೋಕಾರ್ಪಣೆಗೊಳಿಸಿದರು.
ಸಮ್ಮಾನ
ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ ಕಡೆಂತ್ಯಾರ್, ಕಟ್ಟಡ ವಿನ್ಯಾಸಕಾರ ಶರಣು ಅಂಚನ್, ಗುತ್ತಿಗೆದಾರ ಸುದರ್ಶನ್ ಮಂಗಳೂರು, ವಿದ್ಯುತ್ ಗುತ್ತಿಗೆದಾರ ಸೀತಾರಾಮ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಹಕಾರಿ ಆ್ಯಪ್ ಬಿಡುಗಡೆ
ಸಂಘದ ಬ್ಯಾಂಕಿಂಗ್ ವ್ಯವಹಾರದ ಮಾಹಿತಿಯುಳ್ಳ ಸಹಕಾರಿ ಆಪ್ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ ಅಧ್ಯಕ್ಷ ಭಾಸ್ಕರ್ ಎಂ ಪೆರುವಾಯಿ ಅವರು ಬಿಡುಗಡಗೊಳಿಸಿದರು.
ಯಕ್ಷ-ಗಾನ-ಹಾಸ್ಯ ವೈಭವ
ಮಧ್ಯಾಹ್ನ ಬಳಿಕ ರವಿಚಂದ್ರ ಕನ್ನಡಿ ಕಟ್ಟೆ ಅವರ ಸಾರಥ್ಯದಲ್ಲಿ ಯಕ್ಷ-ಗಾನ-ಹಾಸ್ಯ ವೈಭವ ನೆರವೇರಿತು. ಶಾಸಕ ಹರೀಶ್ ಪೂಂಜ, ಭಾಸ್ಕರ್ ಎಸ್ ಕೋಟ್ಯಾನ್, ರಕ್ಷಿತ್ ಶಿವರಾಮ್, ಜಯವಿಕ್ರಮ ಕಲ್ಲಾಪು ನಿರ್ದೇಶಕರಾದ ಸುಜಿತಾ ವಿ ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ ಗುರುಕೃಪಾ, ಕೆ.ಪಿ. ದಿವಾಕರ, ಚಂದ್ರಶೇಖರ, ಧರಣೇಂದ್ರ ಕುಮಾರ್, ಪಿ. ಗಂಗಾಧರ ಮಿತ್ತಮಾರು, ಆನಂದ ಪೂಜಾರಿ ಸರ್ವೇದೋಳ, ಡಾ. ರಾಜಾರಾಂ ಕೆ.ಬಿ., ಜಯವಿಕ್ರಮ ಪಿ., ಮುಖ್ಯ ಕಾರ್ಯ ನಿರ್ವಹಣಾದಿಕಾರಿ ಅಶ್ವಥ್ ಕುಮಾರ್ ಉಪಸ್ಥಿತರಿದ್ದರು. ನಿರ್ದೇಶಕ ಪಿ.ಧರಣೇಂದ್ರ ಕುಮಾರ್ ಅವರು ಸ್ವಾಗತಿಸಿದರು, ಮೋನಪ್ಪ ಪೂಜಾರಿ ಕಡೆಂತ್ಯರು ಪ್ರಾಸ್ತವಿಕವಾಗಿ ಮಾತಾಡಿದರು. ನಿರ್ದೇಶಕ ಜಗದೀಶ್ ಚಂದ್ರ ಡಿ.ಕೆ. ವಂದಿಸಿದರು, ಪ್ರಜ್ಞಾ ಓಡಿಲ್ನಾಳ ಹಾಗೂ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು
19.08.23
05.03.23
05.03.23
28.02.23
11.03.2023
06.01.23
31.12.22
04.09.22
--
-.
--
-.
--
-.
--
Copyright © 2024 ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ನಿ. ಬೆಳ್ತಂಗಡಿ - All Rights Reserved.
We use cookies to analyze website traffic and optimize your website experience. By accepting our use of cookies, your data will be aggregated with all other user data.